fahim akthar ullal

Sharing Islamic Information to India and World…


Leave a comment

ಹತ್ತವರ ಸೇವೆ ಮಾಡುವ ಬದುಕು

“ನೀವು ಅವನ (ಅಲ್ಲಾಹ್) ಹೊರತು ಬೇರೆ ಯಾರನ್ನು ಆರಾಧಿಸದಿರಲು ಮತ್ತು ಮಾತಾಪಿತರಿಗೆ ಒಳಿತನ್ನು ಮಾಡಲು ತಮ್ಮ ಪ್ರಭು ವಿಧಿಸಿರುವನು .ಅವರ(ಮಾತಾಪಿತರ)ಪೈಕಿ ಒಬ್ಬರು ಅಥವಾ ಇಬ್ಬರೂ ತಮ್ಮ ವೃದ್ದಾಪ್ಯ ತಲುಪಿದರೆ ಅವರೊಂದಿಗೆ “ಛೆ” ಎಂದು ಹೇಳುವುದಾಗಲಿ, ಅವರನ್ನು ಗದರಿಸುವುದಾಗಲೀ ಮಾಡದಿರಿ . ಗೌರವದಿಂದ ಕೂಡಿದ ಮಾತುಗಳನ್ನಷ್ಟೇ ಅವರೂಂದಿಗೆ ಹೇಳಿರಿ. ನಯ ವಿನಯ ಮತ್ತು ಕರುಣೆಯೊಂದಿಗೆ ಅವರ ಮುಂದೆ ಭಾಗಿಕೊಡಿರಿ. “ಓ ನನ್ನ ಪ್ರಭೂ, ಇವರು ನನ್ನ ಚಿಕ್ಕಂದಿನಲ್ಲಿ ದಯಾ ವಾತ್ಸಲ್ಯಗಳಿಂದ ನನ್ನನ್ನು ಸಾಕಿದಂತೆಯೇ ನೀನು ಅವರ ಮೇಲೆ ಕ್ರಪೆತೋರು” ಎಂದು ಪ್ರಾರ್ಥಿಸಿರಿ.

(ಕುರಾನ್ 17: 23-24)

Advertisements


Leave a comment

ಸುನ್ನಃ ನಿಷೇಧಿಸುವುದು ಪಥಭ್ರಷ್ಟತೆಯಾಗಿದೆ

“ಅಲ್ಲಾಹು ಮತ್ತು ಅವನ ಸಂದೇಶವಾಹಕರು ಒಂದು ವಿಷಯದಲ್ಲಿ ತಿರ್ಮಾನಿಸಿದ ಬಳಿಕ ಸತ್ಯವಿಶ್ವಾಸಿಗಾಗಲಿ,  ಸತ್ಯವಿಶ್ವಾಸಿಗಾಗಲಿ ತಮ್ಮ ವಿಷಯಕ್ಕೆ ಸಂಬಂಧಿಸಿ ಸ್ವತಂತ್ರ ಅಭಿಪ್ರಾಯವಿರುವುದು ಯುಕ್ತವಲ್ಲ. ಯಾರು ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು ಧಿಕ್ಕರಿಸುವನೋ ಅವನು ಸ್ಪಷ್ಟವಾದ ಪಥಭ್ರಷ್ಟತೆಯಲ್ಲಿರುವನು. 

[ಕುರಾನ್: 33: 36]


Leave a comment

ಸುನ್ನಃ ಕುರಾನಿನ ವ್ಯಖ್ಯಾನವಾಗಿದೆ

“ಜನರಿಗೆ ಅವತೀರ್ಣಗೊಂಡಿರುವುದನ್ನು ತಾವು ಅವರಿಗೆ ವಿವರಿಸಿಕೊಡುವ ಸಲುವಾಗಿ ತಮಗೆ ನಾವು ಸಂದೇಶವನ್ನು ಅವತೀರ್ಣಗೊಳಿಸಿದೆವು. ಅವರು ಚಿಂತಿಸಿ ಗ್ರಹಿಸುವವರಾಗಲೂಬಹುದು.”

(ಕುರಾನ್, 16: 44)


Leave a comment

ಸತ್ಯಸಂಧವಾಗಿರುವ ಬದುಕು

ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವನ್ನು ಭಯಪಡಿರಿ ಮತ್ತು ಸತ್ಯಸಂಧರ ಜೊತೆಗೆ ಸೇರಿದವರಾಗಿರಿ.

[ಕುರಾನ್: 9: 119]

 

ಅವರು ಸಹನೆ ವಹಿಸುವವರೂ,ಸತ್ಯಸಂಧರೂ, ಭಯಭಕ್ತಿಯುಳ್ಳವರೂ, ವ್ಯಯಿಸುವವರೂ, ರಾತ್ರಿಯ ಅಂತ್ಯಯಾಮಗಳಲ್ಲಿ ಪಾಪಮುಕ್ತಿಯನ್ನು ಬೇಡುವವರೂ ಆಗಿರುವರು.

(ಕುರ್ ಆನ್: 3: 17)

 

ಮುಹಮ್ಮದ್ (ಸ) ಹೇಳಿದರು: ನೀವು ಸತ್ಯವನ್ನೇ ನುಡಿಯಿರಿ. ಯಾಕೆಂದರೆ ಸತ್ಯವು ಒಳಿತಿನಡೆಗೆ ಮತ್ತು ಒಳಿತು ಸ್ವರ್ಗದೆಡೆಗೆ ಮುನ್ನಡೆಸುತ್ತದೆ.

[ಮುಸ್ಲಿಮ್]  


Leave a comment

ಸ್ನೇಹ ಹಾಗೂ ಸಮಾಜ ಒಟ್ಟು ನೀಡಿದ ಧರ್ಮ

ಪ್ರವಾದಿ (ಸ) ರವರು ಹೇಳುತ್ತಾರೆ; “ಜನರಿಗೆ ಅತ್ಯಂತ ಹೆಚ್ಚು ಪ್ರಯೋಜನಕಾರಿಯಾಗಿರುವವನೇ ಜನರ ಪೈಕಿ ಅಲ್ಲಾಹುವಿಗೆ ಅತ್ಯಂತ ಹೆಚ್ಚು ಪ್ರಿಯನು. 

[ತಿರ್ಮಿದಿ]  


Leave a comment

ಶರಣಾಗತ ಬದುಕಿನ ಆಧಾರ ಸ್ಥಂಬಗಳು

  1. ಅಲ್ಲಾಹನ ಹೊರತು ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲ ಮತ್ತು ಮುಹಮ್ಮದ್ (ಸ) ಅವನ ಸಂದೇಶವಾಹಕರಾಗಿದ್ದಾರೆ ಎಂಬ ಸಾಕ್ಷ್ಯವಚನ
  2. ದಿನನಿತ್ಯ ಐದು ಹೊತ್ತಿನ ಕಡ್ಡಾಯ ನಮಾಝ್ 
  3. ವಾರ್ಷಿಕ ಕಡ್ಡಾಯ ದಾನ (ಝಕಾತ್)
  4. ರಮಾದಾನ್ ತಿಂಗಳ ಕಡ್ದಾಯ ಉಪವಾಸ 
  5. ಆರ್ಥಿಕ ಮತ್ತು ದೈಹಿಕ ಸಾಮರ್ಥ್ಯವುಳ್ಳವರು ಹಜ್ಜ್ ನಿರ್ವಹಿಸುವುದು