fahim akthar ullal

Sharing Islamic Information to India and World…

ಕಣ್ಣೆದ್ದೂ ಕುರುಡರು

Leave a comment

31. ಹೇಳಿರಿ; ‘‘ಆಕಾಶದಿಂದಲೂ ಭೂಮಿಯಿಂದಲೂ ನಿಮಗೆ ಆಹಾರವನ್ನು ಒದಗಿಸುವವನು ಯಾರು? ಕೇಳುವ ಹಾಗೂ ನೋಡುವ ಸಾಮರ್ಥ್ಯಗಳ ಒಡೆಯನು ಯಾರು? ನಿರ್ಜೀವಿಯಿಂದ ಜೀವಿಯನ್ನು ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರ ತೆಗೆಯುವವನು ಯಾರು? ಮತ್ತು ವಿಶ್ವ ವ್ಯವಸ್ಥೆಯನ್ನು ನಡೆಸುತ್ತಿರುವವನು ಯಾರು?’’- ಅವರು ‘‘ಅಲ್ಲಾಹ್’’ ಎಂದು ಹೇಳುವರು. ಹೇಳಿರಿ; ‘‘(ಇಷ್ಟಾಗಿಯೂ) ನೀವು ಅಂಜುವುದಿಲ್ಲವೇ?’’

32. ಆ ಅಲ್ಲಾಹನೇ ನಿಮ್ಮ ನಿಜವಾದ ಒಡೆಯನು. ಇನ್ನು ಸತ್ಯದ ಬಳಿಕ ಇರುವುದು ಮಿಥ್ಯವಲ್ಲದೆ ಮತ್ತೇನು? ಹೀಗಿರುತ್ತಾ ನೀವು ಅದೆಲ್ಲಿ ಅಲೆದಾಡುತ್ತಿರುವಿರಿ?’’

33. ಹೀಗೆ, ‘‘ಅವರು ನಂಬುವವರಲ್ಲ’’ ಎಂಬ ನಿಮ್ಮ ಒಡೆಯನ ಮಾತು, ಅವಿಧೇಯರ ಪಾಲಿಗೆ ಸತ್ಯವಾಯಿತು.

34. ಹೇಳಿರಿ; (ದೇವತ್ವದಲ್ಲಿನ) ನಿಮ್ಮ ಪಾಲುದಾರರ ಪೈಕಿ, ಸೃಷ್ಟಿಯನ್ನು ಆರಂಭಿಸುವವರು ಮತ್ತು ಅದನ್ನು ಪುನರಾವರ್ತಿಸುವವರು ಯಾರಾದರೂ ಇದ್ದಾರೆಯೇ? ಹೇಳಿರಿ; ಅಲ್ಲಾಹನೇ ಸೃಷ್ಟಿಯನ್ನು ಆರಂಭಿಸುತ್ತಾನೆ ಮತ್ತು ಅವನೇ ಅದನ್ನು ಪುನರಾವರ್ತಿಸುತ್ತಾನೆ. ಹೀಗಿರುತ್ತಾ ನೀವು ಅದೆಲ್ಲಿ ಅಲೆಯುತ್ತಿರುವಿರಿ?

 35. ಹೇಳಿರಿ; (ದೇವತ್ವದಲ್ಲಿನ) ನಿಮ್ಮ ಪಾಲುದಾರರ ಪೈಕಿ, ಸತ್ಯದೆಡೆಗೆ ಮಾರ್ಗದರ್ಶನ ಮಾಡುವವರು ಯಾರಾದರೂ ಇದ್ದಾರೆಯೇ? ಹೇಳಿರಿ; ಅಲ್ಲಾಹನೇ ಸತ್ಯದೆಡೆಗೆ ಮಾರ್ಗದರ್ಶನ ಮಾಡುತ್ತಾನೆ. ಅನುಸರಣೆಗೆ ಹೆಚ್ಚು ಅರ್ಹನು, ಸತ್ಯದೆಡೆಗೆ ಮಾರ್ಗದರ್ಶನ ಮಾಡುವವನೋ ಅಥವಾ ಯಾರಾದರೂ ತನಗೆ ಸರಿದಾರಿ ತೋರದಿದ್ದರೆ ಸ್ವತಃ ಸರಿದಾರಿಯನ್ನು ಕಾಣಲಾಗದವನೋ? ನಿಮಗೇನಾಗಿದೆ? ನೀವು ಅದೆಂತಹ ನಿರ್ಧಾರಗಳನ್ನ್ನು ಕೈಗೊಳ್ಳುತ್ತಿರುವಿರಿ?

36. ಅವರಲ್ಲಿ ಹೆಚ್ಚಿನವರು ಕೇವಲ ಊಹೆಯನ್ನಷ್ಟೇ ಅನುಸರಿಸುತ್ತಿದ್ದಾರೆ. ಖಂಡಿತವಾಗಿಯೂ ಊಹೆಯು ಸತ್ಯಕ್ಕೆ ಕಿಂಚಿತ್ತೂ ಪರ್ಯಾಯವಾಗಲಾರದು. ಅವರು ಮಾಡುತ್ತಿರುವುದನ್ನೆಲ್ಲಾ ಅಲ್ಲಾಹನು ಚೆನ್ನಾಗಿ ಬಲ್ಲನು.

 37. ಈ ಕುರ್‌ಆನ್, ಅಲ್ಲಾಹನ ಹೊರತು ಬೇರೆ ಯಾರಾದರೂ ರಚಿಸಬಹುದಾದ ಕೃತಿಯಲ್ಲ್ಲ . ನಿಜವಾಗಿ ಇದು, ಈಗಾಗಲೇ ತನ್ನ ಮುಂದಿರುವವುಗಳನ್ನು (ಗತಕಾಲದ ದಿವ್ಯ ಗ್ರಂಥಗಳನ್ನು) ಸಮರ್ಥಿಸುತ್ತದೆ ಮತ್ತು ದಿವ್ಯ ಆದೇಶಗಳನ್ನು ವಿವರಿಸುತ್ತದೆ. ಇದು ಸರ್ವಲೋಕಗಳ ಒಡೆಯನ ಕಡೆಯಿಂದ ಬಂದಿದೆ ಎಂಬ ಬಗ್ಗೆ ಸಂದೇಹವೇ ಇಲ್ಲ.

38. (ದೂತರೇ,) ‘‘ಈತನೇ ಇದನ್ನು ರಚಿಸಿದ್ದಾನೆ’’ ಎಂದು ಅವರು ಹೇಳುತ್ತಾರೆಯೇ? ನೀವು ಹೇಳಿರಿ; ನೀವು ಸತ್ಯವಂತರಾಗಿದ್ದರೆ, ಇಂತಹ ಒಂದು ಅಧ್ಯಾಯವನ್ನಾದರೂ ರಚಿಸಿ ತನ್ನಿರಿ ಮತ್ತು (ಅದಕ್ಕಾಗಿ) ಅಲ್ಲಾಹನ ಹೊರತು ನಿಮಗೆ ಸಾಧ್ಯವಿರುವ ಎಲ್ಲರನ್ನೂ ಕರೆಯಿರಿ.

39. ನಿಜವಾಗಿ ಅವರು, ತಮ್ಮ ಜ್ಞಾನದ ವ್ಯಾಪ್ತಿಗೆ ಮೀರಿದ ಮತ್ತು ತಮ್ಮ ಮುಂದೆ ಸಾಕ್ಷಾತ್ಕಾರವಾಗಿಲ್ಲದ ಎಲ್ಲವನ್ನೂ ಸುಳ್ಳೆಂದು ಧಿಕ್ಕರಿಸುತ್ತಾರೆ. ಅವರ ಹಿಂದಿನವರೂ ಇದೇ ರೀತಿ (ದಿವ್ಯ ಸಂದೇಶವನ್ನು) ಸುಳ್ಳೆಂದು ಧಿಕ್ಕರಿಸಿದ್ದರು. (ಇಂತಹ) ಅಕ್ರಮಿಗಳ ಗತಿ ಏನಾಯಿತೆಂಬುದನ್ನು ನೋಡಿರಿ.

40. ಇದರಲ್ಲಿ (ದಿವ್ಯ ಸಂದೇಶದಲ್ಲಿ) ನಂಬಿಕೆ ಉಳ್ಳವರೂ ಅವರಲ್ಲಿದ್ದಾರೆ ಮತ್ತು ಇದರಲ್ಲಿ ನಂಬಿಕೆ ಇಲ್ಲದವರೂ ಅವರಲ್ಲಿದ್ದಾರೆ. ನಿಮ್ಮ ಒಡೆಯನು ಗೊಂದಲಕೋರರನ್ನು ಚೆನ್ನಾಗಿ ಬಲ್ಲನು.

41. ಅವರು ನಿಮ್ಮನ್ನು ಸುಳ್ಳನೆಂದು ಧಿಕ್ಕರಿಸಿದರೆ ನೀವು ಹೇಳಿರಿ; ನನಗೆ ನನ್ನ ಕರ್ಮ ಮತ್ತು ನಿಮಗೆ ನಿಮ್ಮ ಕರ್ಮ. ನಾನು ಮಾಡುವ ಯಾವ ಕರ್ಮಕ್ಕೂ ನೀವು ಹೊಣೆಗಾರರಲ್ಲ ಮತ್ತು ನೀವು ಮಾಡುವ ಯಾವ ಕರ್ಮಕ್ಕೂ ನಾನು ಹೊಣೆಗಾರನಲ್ಲ.

42. ಅವರಲ್ಲಿ ಕೆಲವರು ನಿಮ್ಮೆಡೆಗೆ ಕಿವಿಗೊಟ್ಟಿರುತ್ತಾರೆ. ಆದರೆ ನೀವೇನು ಕಿವುಡರಿಗೆ ಕೇಳಿಸುವಿರಾ – ಅವರು ವಿವೇಚಿಸಲಾಗದವರಾಗಿದ್ದರೂ?

 43. ಇನ್ನು, ಅವರಲ್ಲಿ ಕೆಲವರು ನಿಮ್ಮೆಡೆಗೆ ನೋಡುತ್ತಿರುತ್ತಾರೆ. ಆದರೆ, ನೀವೇನು ಕುರುಡರಿಗೆ ದಾರಿ ತೋರಿಸುವಿರಾ -ಅವರು ಏನನ್ನೂ ನೋಡಲಾಗದವರಾಗಿದ್ದರೂ?

[ಕುರ್ ಆನ್, 10: 31-43]

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s