fahim akthar ullal

Sharing Islamic Information to India and World…

ಪ್ರವಾದಿ(ಸ)ರವರು ಅನೇಕ ಬಾರಿ ವಿವಾಹವಾಗಿದ್ದೇಕೆ?

Leave a comment

ಇಸ್ಲಾಮಿನ ವಿಮರ್ಶಕರು ಅತಿಹೆಚ್ಚಾಗಿ ಟೀಕಿಸುವ ಅನೇಕ ವಿಷಯಗಳಲ್ಲಿ ಒಂದಾಗಿದೆ ಪ್ರವಾದಿ(ಸ)ರವರ ಬಹುಪತ್ನಿತ್ವ. ಈ ರೀತಿ ಟೀಕಿಸುವ ಅವರ ಮುಖ್ಯ ಉದ್ದೇಶವು ಪ್ರವಾದಿ(ಸ)ರವರನ್ನು ಸ್ತ್ರೀ ಲಂಪಟ ಅಥವಾ ಕಾಮುಕ ಎಂಬಂತೆ ಚಿತ್ರೀಕರಿಸುವುದಾಗಿದೆ ಎಂಬುದರಲ್ಲಿ ಸಂದೇಹವೇ ಇಲ್ಲ.

ಆದರೆ ವಾಸ್ತವಿಕವಾಗಿ ಪ್ರವಾದಿ(ಸ)ರವರು ಅನೇಕ ಬಾರಿ ವಿವಾಹವಾಗಿದ್ದಾದರೂ ಏಕೆ? ಅವರ ಬಹುವಿವಾಹದ ಹಿಂದೆ ಸಮುದಾಯದ ಉನ್ನತಿಯನ್ನು ಬಯಸುವ ಉದ್ದೇಶವೇನಾದರೂ ಇತ್ತೇ? ಅಥವಾ ಕೇವಲ ಕಾಮೋದ್ರೇಕದಿಂದ ಅವರು ಹಲವಾರು ಬಾರಿ ವಿವಾಹವಾದರೇ?

ಪ್ರವಾದಿ(ಸ)ರವರ ಬಹುಪತ್ನಿತ್ವವನ್ನು ಟೀಕಿಸುವವರಲ್ಲಿ ಹಲವರು ಪ್ರವಾದಿ(ಸ)ರವರು ಐವತ್ತು ಮದುವೆಯಾಗಿದ್ದಾರೆಂದೂ, ಇಪ್ಪತ್ತು ಮದುವೆಯಾಗಿದ್ದಾರೆಂದೂ, ಹದಿನಾರು ಮದುವೆಯಾಗಿದ್ದಾರೆಂದೂ ಹೇಳುತ್ತಾರೆ. ಆದರೆ ಪ್ರವಾದಿ(ಸ)ರವರು ಹನ್ನೆರಡು ಬಾರಿ ಮಾತ್ರವೇ ವಿವಾಹವಾಗಿದ್ದರು. ಅವರ ಮಡದಿಯರ ಹೆಸರುಗಳು ಹೀಗಿವೆ:

1. ಖದೀಜಾ ಬಿನ್ತ್ ಖುವೈಲಿದ್ [ರ]

2. ಸೌದಾ ಬಿನ್ತ್ ಝಮಅಃ [ರ]

3. ಆಯಿಶಾ ಬಿನ್ತ್ ಅಬೀಬಕ್ರ್ ಸಿದ್ದೀಕ್ [ರ]

4. ಹಫ್ಸಾ ಬಿನ್ತ್ ಉಮರ್ ಅಲ್‌ಫಾರೂಕ್ [ರ]

5. ಝೈನಬ್ ಬಿನ್ತ್ ಖುಝೈಮಃ [ರ]

6. ಉಮ್ಮು ಸಲಮಾ ಹಿಂದ್ ಬಿನ್ತ್ ಉತ್ಬಾ [ರ]

7. ಝೈನಬ್ ಬಿನ್ತ್ ಜಹ್‌ಶ್ [ರ]

8. ಜುವೈರಿಯಾ ಬಿನ್ತ್ ಅಲ್‌ಹಾರಿಸ್ [ರ] 

9. ಸಫಿಯ್ಯಾ ಬಿನ್ತ್ ಹುಯಯ್ಯ್ ಇಬ್ನ್ ಅಖ್ತಬ್ [ರ]

10. ಉಮ್ಮು ಹಬೀಬಾ ರಮ್ಲಾ ಬಿನ್ತ್ ಅಬೀ ಸುಫ್ಯಾನ್ [ರ]

11. ಮಾರಿಯಾ ಬಿನ್ತ್ ಶಮ್‌ಊನ್ ಅಲ್‌ಮಿಸ್ರಿಯ್ಯಃ [ರ]

12. ಮೈಮೂನಾ ಬಿನ್ತ್ ಅಲ್‌ಹಾರಿಸ್ [ರ]

ಇವರಲ್ಲಿ ಆಯಿಶಾ(ರ)ರವರು ಮಾತ್ರ ಕನ್ಯೆಯರಾಗಿದ್ದರು. ಉಳಿದವರೆಲ್ಲರೂ ವಿಧವೆಯರೋ ವಿವಾಹ ವಿಚ್ಛೇದಿತೆಯರೋ ಆಗಿದ್ದರು.

ಪ್ರವಾದಿ(ಸ)ರವರು ಮರಣಹೊಂದಿದಾಗ ಹತ್ತು ಮಂದಿ ಪತ್ನಿಯರನ್ನು ಬಿಟ್ಟಗಲಿದ್ದರು. ಖದೀಜಾ ಮತ್ತು ಝೈನಬ್ ಅವರ ಜೀವಿತಕಾಲದಲ್ಲೇ ಮೃತಪಟ್ಟಿದ್ದರು. ಮಾರಿಯಾರವರ ಹೊರತು ಉಳಿದವರೆಲ್ಲರೂ ಅರಬಿಗಳಾಗಿದ್ದರು. ಮಾರಿಯಾ ಈಜಿಪ್ಟಿನವರಾಗಿದ್ದರು ಮತ್ತು ಕ್ರೈಸ್ತರಾಗಿದ್ದರು. ಸಫಿಯ್ಯಾ ಯಹೂದಿಯಾಗಿದ್ದರು. ಉಳಿದ ಹತ್ತು ಪತ್ನಿಯರೂ ಮುಸ್ಲಿಮರಾಗಿದ್ದರು.

ಪ್ರವಾದಿ(ಸ)ರವರು ಇಷ್ಟೊಂದು ವಿವಾಹವಾಗಿರುವುದು ಯಾತಕ್ಕೆ?

   ಮುಹಮ್ಮದ್ [ಸ] 25 ವಯಸ್ಸು ತನಕ ಮಾಡುವೆಯಾಗಿರಲಿಲ್ಲ.

   ಪ್ರವಾದಿ [ಸ] 25 ರಿಂದ 50 ವಯಸ್ಸು ತನಕ ಒಂದೇ ಪತ್ನಿಯಲ್ಲಿ ತ್ರಪ್ತಿ

   ಯಾರದರೂ ಮಾಡುವೆ ಮಾಡಲು ಅಷ್ಟು ಇಚ್ಛೆ ಇರುತ್ತಿದ್ದರೆ ಹೀಗೆ ಮಾಡುತ್ತಾರೇ? ಇಲ್ಲ ಪ್ರವಾದಿ [ಸ] ಎಲ್ಲ ಮದುವೆಗಳು ಅಲ್ಲಾಹನ ಕಲ್ಪನೆ ಮತ್ತು ಇಸ್ಲಾಮನ್ನು ಬಲಿಷ್ಠಗೊಳಿಸುವ ಉದ್ದೇಶದಿಂದವಾಗಿತ್ತು. ದಯವಿಟ್ಟು ಚಿಂತಿಸಿ ನೀವೇ! ಅಲ್ಲಾಹನು ಹಿದಾಯತ್ ನೀಡಲಿ, ಆಮೀನ್.

Advertisements

Author: ಕನ್ನಡ ಕುರಾನ್ ಮತ್ತು ಹದೀತ್

Sharing Islamic Information to India and World...

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s