ಹ.ಅಬ್ದುಲ್ಲಾ ಬಿನ್ ಮಸುಊದ್(ರ) ರಿಂದ ವರದಿ: ಪ್ರವಾದಿ ಮುಹಮ್ಮದ್(ಸ) ಹೀಗೆ ಹೇಳಿರುವರು: ಸತ್ಯವನ್ನು ಅನುಸರಿಸಿರಿ. ಸತ್ಯವು ಒಳಿತಿನೆಡೆಗೆ ಒಯ್ಯುತ್ತದೆ. ಒಳಿತು ಸ್ವರ್ಗದೆಡೆಗೆ ಒಯ್ಯುತ್ತದೆ. ಮನುಷ್ಯನು ಸತ್ಯವನ್ನೇ ಹೇಳುತ್ತಾ, ಸತ್ಯವನ್ನೇ ಅನುಸರಿಸುತ್ತಾ ಇದ್ದರೆ ಕೊನೆಗೊಮ್ಮೆ ಅಲ್ಲಾಹನ ಬಳಿ ಅವನನ್ನು ಸಿದ್ದೀಕ್ (ಪರಮ ಸತ್ಯವಂತ) ಎಂದು ಬರೆದಿಡಲಾಗುತ್ತದೆ. ಸುಳ್ಳಿನಿಂದ ದೂರವಿರಿ. ಸುಳ್ಳು ಕೆಡುಕಿನೆಡೆಗೆ ಕೊಂಡೊಯ್ಯುತ್ತದೆ ಮತ್ತು ಕೆಡುಕು ನರಕದೆಡೆಗೆ ಕೊಂಡೊಯ್ಯುತ್ತದೆ ಮನುಷ್ಯನು ಸಳ್ಳನ್ನೇ ಹೇಳುತ್ತಲಿದ್ದರೆ ಮತ್ತು ಸುಳ್ಳನ್ನೇ ಅನುಸರಿಸುತ್ತಲಿದ್ದರೆ ಕೊನೆಗೊಮ್ಮೆ ಅಲ್ಲಾಹನ ಬಳಿ ಅವನನ್ನು ಪರಮ ಸುಳ್ಳುಗಾರ ಎಂದು ಬರೆದಿಡಲಾಗಿತ್ತದೆ.
[ಮುಸ್ಲಿಮ್]
Advertisements