fahim akthar ullal

Sharing Islamic Information to India and World…


Leave a comment

ಹೃದಯದ ಮಲಿನತೆ

ಅಲ್ಲಾಹನ ಸಂದೇಶವಾಹಕ[ಸ]ರು ಹೇಳುತ್ತಾರೆ;
ದೇಹದಲ್ಲಿ ಒಂದು ಮಾಂಸಪಿಂಡವಿದೆ. ಅದು ಉತ್ತಮವಾದರೆ ಇಡೀ ದೇಹವು ಉತ್ತಮವಾಗುತ್ತದೆ. ಅದು ಕೆಟ್ಟರೆ ಸಮಗ್ರ ದೇಹವು ಕೆಟ್ಟ ಹೋಗುತ್ತದೆ. ತಿಳಿಯಿರಿ, ಅದು ಕ್ವಲ್ಬ್ (ಹೃದಯ) ಆಗಿದೆ.
[ಮುಸ್ಲಿಮ್]
ಇಮಾಮ್ ಇಬ್ನ್ ಹಜರ್ [ರ] ಹೇಳುತ್ತಾರೆ;
“ಈ ಹದೀಸ್ ನಲ್ಲಿ ಹೃದಯದ ಸ್ಥಾನವನ್ನು ಪ್ರಶಂಸಿಸಿ ಅದನ್ನು ಉತ್ತಮಪಡಿಸಬೆಕೆಂದು ಪ್ರೋತ್ಸಾಹಿಸಲಾಗಿದೆ. ಉತ್ತಮ ಸಂಪಾದನೆ ಹೃದಯದ ಮೇಲೆ ಪ್ರಭಾವ ಬೀರುತ್ತದೆ ಎಂಬ ಸೂಚನೆಯೂ ಇದರಲ್ಲಿದೆ.
[ಫತ್ಹುಲ್ ಬಾರಿ ೧೨/೨೮ ನೋಡಿರಿ]

Advertisements


Leave a comment

ಏಕದೇವತ್ವದ ೩ ಘಟಕಗಳು

ಏಕದೇವ ವಿಶ್ವಾಸಕ್ಕೆ ಮೂರು ಘಟಕಗಳು
1. ಪ್ರಭುತ್ವದ ಏಕತ್ವ
2. ಆರಾಧ್ಯನಾಗಿರುವುದರಲ್ಲಿ ಏಕತ್ವ
3. ಗುಣನಾಮಗಳಲ್ಲಿ ಏಕತ್ವ


Leave a comment

ಬಹುದೇವವಿಶ್ವಾಸಕ್ಕೆ [ಶಿರ್ಕ್’ಗೆ] ೩ ಘಟಕಗಳಿವೆ

  1. ಅತ್ಯಂತ ದೊಡ್ಡ ಬಹುದೇವ ವಿಶ್ವಾಸ
  2. ಅತ್ಯಂತ ಸಣ್ಣ ಬಹುದೇವ ವಿಶ್ವಾಸ
  3. ಗುಪ್ತವಾದ ಬಹುದೇವ ವಿಶ್ವಾಸ

ಹೀಗೆ ಬಹುದೇವ ವಿಶ್ವಾಸಕ್ಕೆ ಮೂರು ಘಟಕಗಳಿವೆ


Leave a comment

ಇಹ್ಸಾನ್

ಆರಾಧನಾ ಕರ್ಮಗಳನ್ನು ನಿರ್ವಹಿಸುವಾಗ ಸಂಪೂರ್ಣವಾಗಿ ಅಲ್ಲಾಹನ ಕಡೆಗೆ ಗಮನ ಕೆಂದ್ರೀಕರಿಸುವುದು ಇಹ್ಸಾನ್ ಆಗಿದೆ. ಅಲ್ಲಾಹು ಹೇಳುತ್ತಾನೆ.
ನೀವು ಏಳುವಾಗ ಅವನು ನಿಮ್ಮನ್ನು ನೋಡುತ್ತಿರುತ್ತಾನೆ. ಮತ್ತು ಸಾಷ್ಟಾಂಗವೆರಗುವವರ ಮಧ್ಯೆ ನಿಮ್ಮ ಚಲನ-ವಲನಗಳ ಮೇಲೆ ಕಣ್ಣಿಟ್ಟಿರುತ್ತಾನೆ.[ಕುರಾನ್, ೨೬: ೨೧೮, ೨೧೯]
ಇಹ್ಸಾನ್ ಎಂದರೆ ನೀವು ಅಲ್ಲಾಹನನ್ನು ನೋಡುತ್ತಿದ್ದೀರೆಂಬ ಭಾವನೆಯೊಂದಿಗೆ ಅವನ ಆರಾಧನೆಗಳನ್ನು ನಿರ್ವಹಿಸುವುದಾಗಿದೆ. ನೀವು ಅವನನ್ನು ಕಾಣದಿದ್ದರೂ ಅವನು ನಿಮ್ಮನ್ನು ನೋಡುತ್ತಿರುತ್ತಾನೆ.
[ಮುಸ್ಲಿಮ್]


Leave a comment

ಸುನ್ನತ್ ಮತ್ತು ಬಿದ್ ಅತ್

ಧರ್ಮದಲ್ಲಿ ಪುಣ್ಯವುಳ್ಳ ಯಾವುದೇ ನವೀನಾಚಾರವಿಲ್ಲ. ಇದರ ಆಧಾರವೂ ಅಲ್ಲಾಹನ ಹೇಳಿಕೆಯಾಗಿದೆ.
“ಇಂದು ನಾನು ನಿಮ್ಮ ಧರ್ಮವನ್ನು ಪರಿಪೂರ್ಣಗೊಳಿಸಿದ್ದೇನೆ. ನನ್ನ ಕೊಡುಗೆಯನ್ನು ನಿಮ್ಮ ಮೇಲೆ ಪರಿಪೂರ್ಣಗೊಳಿಸಿದ್ದೇನೆ ಮತ್ತು ಇಸ್ಲಾಮನ್ನು ನಿಮ್ಮ ಧರ್ಮವೆಂಬ ನೆಲೆಯಲ್ಲಿ ಅಂಗಿಕರಿಸಿದ್ದೇನೆ.”
ಮತ್ತು ಪ್ರವಾದಿ [ಸ] ಹೇಳಿರುವರು:
“ಮತ್ತು ಎಲ್ಲಾ ನವೀನಾಚಾರಗಳು ಪಥಭ್ರಷ್ಟತೆಯಾಗಿದೆ ಹಾಗೂ ಎಲ್ಲಾ ಪಥಭ್ರಷ್ಟತೆಯು ನರಕದಲ್ಲಿದೆ.”

ಧರ್ಮದಲ್ಲಿ ನವೀನಾಚಾರವೇನು?
ಧರ್ಮದಲ್ಲಿ ಏನಾದರೂ ಕಾರ್ಯವನ್ನು ಹೆಚ್ಚು-ಕಡಿಮೆ ಮಾಡುವುದಾದರೆ ನವೀನಾಚಾರ. ಅಲ್ಲಾಹನು ಬಹುದೇವಾರಾಧಕರ ನವೀನಾಚಾರಗಳನ್ನು ರದ್ದುಪಡಿಸುತ್ತಾ ಹೇಳುತ್ತಾನೆ.
“ಇವರ ಬಳಿ, ಇವರಿಗಾಗಿ ಧರ್ಮದ ಸ್ವರೂಪದಲ್ಲಿರುವ ಮತ್ತು ಅಲ್ಲಾಹು ಅನುಮತಿಸಿಲ್ಲದ ಜೀವನ  ವಿಧಾನವೊಂದನ್ನು ನಿಶ್ಚಯಿಸಿಕೊಟ್ಟಂತಹ ದೇವ ಸಹಭಾಗಿಗಳು ಇದ್ದಾರೆಯೇ?
ಮತ್ತು ಪ್ರವಾದಿ[ಸ]ರವರು ಹೇಳಿರುವರು:
ಯಾರಾದರೂ ನಮ್ಮ ಧರ್ಮದಲ್ಲಿ ಅದರಲ್ಲಿರದ ಆಚಾರವನ್ನು ತಂದರೆ ಅದು ರದ್ದುಗೊಲಿಸಲ್ಪಡುತ್ತದೆ.

ಧರ್ಮದಲ್ಲಿ ಯಾವುದಾದರೂ ಪುಣ್ಯವುಳ್ಳ ಸುನ್ನತ್ (ಪ್ರವಾದಿ ಚರ್ಯೆ) ಇದೆಯೇ?
ಹೌದು ಧರ್ಮದಲ್ಲಿ ಪುಣ್ಯವುಳ್ಳ ಸುನ್ನತ್ ಇದೆ,
ಪ್ರವಾದಿ[ಸ]ರವರು ಹೇಳಿರುವರು.
ಯಾರಾದರೂ ಧರ್ಮದಲ್ಲಿ ಪುಣ್ಯವುಳ್ಳ ಸುನ್ನತ್ತನ್ನು ಜಾರಿಗೊಳಿಸುತ್ತಾನೋ ಅವನಿಗೆ ಪ್ರತಿಫಲವಿದೆ ಮತ್ತು ನಂತರ ಯಾರೆಲ್ಲಾ ಆ ಸುನ್ನತಿನ ಪ್ರಕಾರ ಸತ್ಕರ್ಮವೆಸಗುವರೋ ಅವರ ಪ್ರತಿಫಲವೂ ಲಭಿಸುವುದು ಆದರೆ ಸತ್ಕರ್ಮವೆಸಗುವವರ ಪ್ರತಿಫಲದಲ್ಲಿ ಯಾವುದೇ ರೀತಿಯ ಕೊರತೆ ಮಾಡಲಾಗದು.

ಮುಸ್ಲಿಮರಿಗೆ ಉತ್ಕ್ರಷ್ಟತೆ ಯಾವಾಗ ದೊರಕುವುದು?
ಅಲ್ಲಾಹನ ಗ್ರಂಥ ಮತ್ತು ಪ್ರವಾದಿ[ಸ]ರವರ ಚರ್ಯೆಯನ್ನು ಕಾರ್ಯರೂಪಕ್ಕೆ ತಂದರೆ ಏಕದೇವ ಆರಾಧನೆಯನ್ನು (ತೌಹೀದ್) ಪ್ರಚಾರ ಪಡಿಸಿದರೆ ಮತ್ತು ದೇವಸಹಭಾಗಿತ್ವ (ಶಿರ್ಕ್)ದ ಎಲ್ಲಾ ರೂಪಗಳಿಂದ ಜನರಲ್ಲಿ ಭಯವುಂಟು ಮಾಡಿದರೆ ಹಾಗೂ ಅಲ್ಲಾಹನು ಶತ್ರುಗಳ ವಿರುದ್ದ ಧರ್ಮವನ್ನು ತಮ್ಮಿಂದಾದಷ್ಟು ಪ್ರಬಲಪಡಿಸಿದರೆ ಮುಸ್ಲಿಮರಿಗೆ ಉತ್ಕ್ರಷ್ಟತೆಯು ದೊರೆಯುವುದು.

ಅಲ್ಲಾಹನು ಹೇಳುತ್ತಾನೆ,
“ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನಿಗೆ ಸಹಾಯ ಮಾಡಿದರೆ ಅವನು ನಿಮಗೆ ಸಹಾಯ ಮಾಡುವನು ಮತ್ತು ನಿಮ್ಮ ಪಾದಗಳನ್ನು ಸ್ಥಿರಗೊಲಿಸುವನು.
[ಕುರಾನ್, ೪೭: ೭]
ನಿಮ್ಮ ಪೈಕಿ ಸತ್ಯವಿಶ್ವಾಸವಿರಿಸಿ ಸತ್ಕರ್ಮವೆಸಗಿದವರೊಡನೆ ಅಲ್ಲಾಹನು ಅವರಿಗಿಂತ ಮುಂಚಿನವರನ್ನು ಭೂಮಿಯಲ್ಲಿ ಪ್ರತಿನಿಧಿಗಳಾಗಿ ಮಾಡಿದಂತೆಯೇ ಅವರನ್ನು ಮಾಡುವನೆಂದು ವಾಗ್ದಾನ ಮಾಡಿರುವನು. ತಾನು ಅವರಿಗಾಗಿ ಮೆಚ್ಚಿರುವ ಅವರ ಧರ್ಮವನ್ನು ಸುಭದ್ರ ಬುನಾದಿಗಳಲ್ಲಿ ಸ್ಥಾಪಿಸುವನು ಮತ್ತು ಅವರ (ಪ್ರಚಲಿತ) ಭಾಯಾವಸ್ಥೆಯನ್ನು ಶಾಂತಿಯಾಗಿ ಮಾರ್ಪಡಿಸಿ ಬಿಡುವನು. ಅವರು ನನ್ನ ಆರಾಧನೆ ಮಾತ್ರ ಮಾಡಲಿ ಮತ್ತು ನನ್ನೊಂದಿಗೆ ಯಾರನ್ನೂ ಸಹಭಾಗಿಗಳಾಗಿ ಮಾಡದಿರಲಿ.
[ಕುರಾನ್]


Leave a comment

ಬಹು ಪತ್ನಿತ್ವವು ಇಸ್ಲಾಂನಲ್ಲಿ ಏಕೆ ಅನುಮತಿಸಲ್ಪಟ್ಟಿದೆ?

1) ಬಹುಪತ್ನಿತ್ವ ಪದದ ವ್ಯಾಖ್ಯೆ
ಬಹುಪತ್ನಿತ್ವವೆಂದರೆ ಒಬ್ಬ ಪುರುಷನು ಒಂದಕ್ಕಿಂತ ಹೆಚ್ಚು ಪತ್ನಿಯನ್ನು ಹೊಂದಿರುವುದಾಗಿದೆ. ಇದು ಸಾಮಾನ್ಯವಾಗಿ ಇಂಗ್ಲೀಷ್‍ನಲ್ಲಿ ಹೇಳುವುದಾದರೆ
ಪಾಲಿಗಮಿ ಎಂಬುದರ ಒಂದನೇ ವಿಧವಾದ ಪಾಲಿಜಿನಿ ಆಗಿದ್ದು,
ಪಾಲಿಯಾಂಡ್ರಿಯು ಅಂದರೆ ಒಬ್ಬ ಸ್ತ್ರೀಯು ಒಂದಕ್ಕಿಂತ ಹೆಚ್ಚು ಗಂಡಂದಿರನ್ನು ಹೊಂದಿರುವುದು ಎರಡನೇ ವಿಧವಾಗಿದೆ.
ಇಸ್ಲಾಂ ಧರ್ಮದಲ್ಲಿ ಒಂದನೇ ವಿಧವಾದ ಪಾಲಿಜಿಯನ್ನು ನಿರ್ದಿಷ್ಠ ಮೇರೆಯೊಂದಿಗೆ ಅನುಮತಿಸಲ್ಪಟ್ಟಿದ್ದು ಎರಡನೇ ವಿಧವಾದ ಪಾಲಿಯಾಂಡ್ರಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

2) ಕುರ್‍ಆನ್ ಒಬ್ಬಳನ್ನೇ ಮದುವೆಯಾಗಿರಿ ಎಂದು ಹೇಳುವ ಏಕೈಕ ಧಾರ್ಮಿಕ ಗ್ರಂಥ
ಒಬ್ಬಳನ್ನೇ ಮದುವೆಯಾಗಿರಿ ಎಂದು ಹೇಳುವಂಥಹ ಧಾರ್ಮಿಕ ಗ್ರಂಥವೊಂದು ಪ್ರಪಂಚದಲ್ಲಿದ್ದರೆ, ಅದು ಪವಿತ್ರ ಕುರ್‍ಆನ್ ಮಾತ್ರ. ಭೂಲೋಕದಲ್ಲಿ ಹೀಗೆ ಹೇಳುವಂಥಹ ಬೇರೆ ಒಂದೇ ಒಂದು ಧಾರ್ಮಿಕ ಗ್ರಂಥವೂ ಇಲ್ಲ. ಅದು ನಾಲ್ಕು ವೇದಗಳೇ ಅಗಿರಲಿ ಆಥವಾ ರಾಮಾಯಣ, ಮಹಾಭಾರತ, ಗೀತಾ, ತಮೂದ್, ಬೈಬಲ್ ಆಗಿರಲಿ ಇವುಗಳಾವುದರಲ್ಲೂ ಒಬ್ಬ ವ್ಯಕ್ತಿಯು ವಿವಾಹವಾಗುವ ಪತ್ನಿಯರ ಸಂಖ್ಯೆಯನ್ನು ನಿಗದಿಪಡಿಸಿಲ್ಲ. ಈ ಗ್ರಂಥಗಳ ಪ್ರಕಾರ ಒಬ್ಬ ವ್ಯಕ್ತಿಯು ತಾನಿಷ್ಟಪಟ್ಟಷ್ಟು ಪತ್ನಿಯರನ್ನು ಹೊಂದಬಹುದಾಗಿದೆ.
ಹಿಂದೂ ಗ್ರಂಥಗಳಿದ್ದಂತೆ ಹಿಂದೂ ಮಹಾಪುರುಷರು ಬಹುಪತ್ನಿತ್ವವನ್ನು ಹೊಂದಿದವರರಾಗಿದ್ದರು. ಉದಾಹರಣೆಗೆ ರಾಜಾ ದಶರಥನು ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದಿದ್ದನು.
ಕೃಷ್ಣನೂ ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಪತ್ನಿಯರನ್ನು ಹೊಂದಿದ್ದನು ಇದರ ನಂತರ ಹಿಂದೂ ಪುರೋಹಿತರು, ಮತ್ತು ಕ್ರಿಶ್ಚಿಯನ್ ಚರ್ಚ್ ಇದರಲ್ಲಿ ತಿದ್ದುಪಡಿ ತಂದು ಸಂಖ್ಯೆಯನ್ನು ಒಂದಕ್ಕೆ ಸೀಮಿತಗೊಳಿಸಿದರು. ಯಹೂದಿಯರಲ್ಲೂ ಬಹುಪತ್ನಿತ್ವವು ಅಂಗೀಕರೀಲ್ಪಟ್ಟಿತು.
ತಲ್ಮೂದ ಗ್ರಂಥದಲ್ಲಿರುವಂತೆ ಅಬ್ರಹಾಂ, ಸುಲೈಮಾನ್ ಇವರೆಲ್ಲರೂ ಒಂದಕ್ಕಿಂತ ಹೆಚ್ಚು ಸಂಖ್ಯೆಯ ಪತ್ನಿಯರನ್ನು ಹೊಂದಿದವರಾಗಿದ್ದರು. ರಾಬ್ಬಿ ಜರ್‍ಷಾಂ ಬೆನ್ ಯಹುದಾ (920 ಅಇ-1030 ಅಇ) ಎಂಬುವರು ಈ ಪದ್ದತಿಯ ವಿರುದ್ಧ ಶಾಸನವನ್ನು ವಿಧಿಸುವವರೆಗೂ ಯಹೂದಿಯರಲ್ಲಿ ಈ ಪದ್ಧತಿಯು ಮುಂದುವರೆದಿತ್ತು. ಮುಸ್ಲಿಂ ರಾಷ್ಟ್ರಗಳಲ್ಲಿ ವಾಸಿಸುತ್ತಿದ್ದ ಒಂದು ಯಹೂದಿ ಸಮುದಾಯದಲ್ಲಿ ಈ ಪದ್ಧತಿಯು 1950 ರವರೆಗೂ ಮುಂದುವರೆದಿತ್ತು. ನಂತರ 1950ರ ಕೊನೆಯ ಭಾಗದಲ್ಲಿ ಆಕ್ಟ್ ಆಫ್ ಚೀಫ್ ರಾಬಿನೇಟ್ ಆಫ್ ಇಸ್ರೇಲ್ ಎಂಬ ಶಾಸನವು ಈ ಪದ್ಧತಿಯನ್ನು ನಿಷೇಧಿಸಿತು.

3) ಬಹುಪತ್ನಿಯರನ್ನು ಹೊಂದಿರುವವರಲ್ಲಿ ಹಿಂದೂಗಳು ಅಧಿಕ ಸಂಖ್ಯೆಯಲ್ಲಿದ್ದಾರೆ:
ಕಮಿಟಿ ಆಫ್ ಸ್ಟೇಟಸ್ ಆಫ್ ವುಮೆನ್ ಇನ್ ಇಸ್ಲಾಂ ಇದು ತನ್ನ ಪುಟ ಸಂಖ್ಯೆ 66 ಮತ್ತು 67, 1975ರಲ್ಲಿ ಸಲ್ಲಿಸಿದ ವರದಿಯಂತೆ 1951 ರಿಂದ 1961 ರ ಮಧ್ಯೆ ಬಹುಪತ್ನಿತ್ವ ಹೊಂದಿದಂಥ ಹಿಂದೂ ಮತ್ತು ಮುಸಲ್ಮಾನರ ಶೇಕಡಾವಾರು ಸಂಖ್ಯೆಯು ಕ್ರಮವಾಗಿ 5.06% ಮತ್ತು 4.31% ಆಗಿತ್ತು. ಭಾರತದಲ್ಲಿ ಮುಸ್ಲಿಮರಿಗೆ ಮಾತ್ರ ಬಹುಪತ್ನಿತ್ವ ಅವಕಾಶವಿದ್ದು, ಇದೇ ಪದ್ಧತಿಯನ್ನು ಹಿಂದುಗಳು ಅನುಸರಿಸುವುದು ಅಪರಾಧವಾಗಿದೆ. ಆದರೂ ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದುವ ವಿಷಯದಲ್ಲಿ ಹಿಂದೂಗಳು ಮುಸ್ಲಿಮರನ್ನು ಸೋಲಿಸಿದ್ದರು. ಹಿಂದಿನ ಕಾಲದಲ್ಲಿ ಹಿಂದುಗಳು ಪತ್ನಿಯರ ಸಂಖ್ಯೆಯ ಮೇಲೆ ಮಿತಿ ಇರಲಿಲ್ಲ. 1954ರಲ್ಲಿ ಹಿಂದೂ ಮ್ಯಾರೇಜ್ ಆಕ್ಟ್ ಎಂಬ ಶಾಸನವು ಹಿಂದೂಗಳಿಗೆ ಬಹುಪತ್ನಿತ್ವವನ್ನು ಅಪರಾಧವನ್ನಾಗಿ ಮಾಡಿತು. ಆದುದರಿಂದ ಬಹುಪತ್ನಿತ್ವವನ್ನು ನಿಷೇಧಿಸಿದ್ದು ಅಥವಾ ಅಪರಾಧವೆಂದು ಪರಿಗಣಿಸಲ್ಪಟ್ಟಿದ್ದು ಭಾರತಿಯ ಕಾನೂನೇ ಹೊರತು ಹಿಂದೂ ಧಾರ್ಮಿಕ ಗ್ರಂಥವಲ್ಲ.

4) ಇನ್ನು ಇಸ್ಲಾಮಿನಲ್ಲಿ ಬಹುಪತ್ನಿತ್ವವನ್ನು ಏಕೆ ಅನುಮತಿಸಲಾಗಿದೆಯಂಬುದನ್ನು ನೋಡಬೇಕಾಗಿದೆ (4) ನಾಲ್ಕು ಪತ್ನಿಯರನ್ನು ಹೊಂದುವುದು ಕಡ್ಡಾಯವಲ್ಲ:
ಮೊದಲೇ ತಿಳಿಸಿದಂತೆ ಒಬ್ಬಳನ್ನೇ ವಿವಾಹವಾಗಲು ಸಲಹೆ ನೀಡುವ ಧಾರ್ಮಿಕ ಗ್ರಂಥವು ಕುರ್ ಆನ್ ಮಾತ್ರವೇ ಆಗಿದ್ದು. ಇದು ಹೇಳುತ್ತದೆ ತನ್ನ 4 ನೇ ಅಧ್ಯಾಯವಾದ ಅನ್ನಿಸಾದ 3 ನೇ ಶ್ಲೋಕದಲ್ಲಿ
“..ಸ್ತ್ರೀಯರಲ್ಲಿ ನಿಮಗೆ ಮೆಚ್ಚಿದ ಇಬ್ಬರನ್ನೋ, ಮೂವರನ್ನೋ, ನಾಲ್ವರನ್ನೋ ವಿವಾಹ ಮಾಡಿಕೊಳ್ಳಿರಿ. ಆದರೆ ಅವರೊಂದಿಗೆ ನ್ಯಾಯ ಪಾಲಿಸಲಾರಿರೆಂಬ ಆಶಂಕೆ ನಿಮಗಿದ್ದರೆ ಒಬ್ಬ ಸ್ತ್ರೀಯನ್ನು ಮಾತ್ರ ವಿವಾಹವಾಗಿರಿ.
ಕುರ್ ಆನ್ ಗ್ರಂಥದ ಅವತೀರ್ಣಕ್ಕೆ ಮೊದಲು ಒಬ್ಬನು ಹೊಂದಿರುವ ಪತ್ನಿಯರ ಸಂಖ್ಯೆ ಮೇಲೆ ಯಾವುದೇ ನಿರ್ಬಂಧವಿರಲಿಲ್ಲ. ಒಬ್ಬನು ತಾನಿಷ್ಟ ಪಟ್ಟಷ್ಟು ಸಂಖ್ಯೆಯ ಪತ್ನಿಯರನ್ನು ಹೊಂದಬಹುದಾಗಿತ್ತು. ಅಂದರೆ ಸಂಖ್ಯೆಯು ಶತಕವನ್ನು ತಲುಪಬಹುದಿತ್ತು. ಇಸ್ಲಾಂ ಧರ್ಮವು ಇದಕ್ಕೊಂದು ಮೇರೆಯನ್ನು ನಿಗದಿಗೊಳಿಸಿತು. ಅಂದರೆ ಒಬ್ಬ ಮುಸ್ಲಿಮನು ಏಕಕಾಲದಲ್ಲಿ ನಾಲ್ಕು ಮಂದಿ ಪತ್ನಿಯರನ್ನು ಮಾತ್ರ ಹೊಂದುವಂತೆ ಆಜ್ಞಾಪಿಸಿ ತನಗಿಷ್ಟ ಬಂದಷ್ಟು ಪತ್ನಿಯನ್ನು ಹೊಂದುವ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಯಿತು. ಮತ್ತು ಇದು “ಪತ್ನಿಯರ ಮಧ್ಯೆ ಯಾವುದೇ ತಾರತಮ್ಯ ತೋರದಂತೆ” ಎಂಬ ಷರತ್ತಿನ ಮೇಲೆ ಮಾತ್ರವಾಗಿದೆ.
ಕುರ್ ಆನ್‍ನ 4 ನೇ ಅಧ್ಯಾಯ ಅನ್ನಿಸಾದ 129 ನೇ ಶ್ಲೋಕವು ಹೇಳುತ್ತದೆ. “..ಪತ್ನಿಯರ ನಡುವೆ ಸರ್ವ ಸಂಪೂರ್ಣ ನ್ಯಾಯ ಪಾಲಿಸಲು ನಿಮ್ಮಿಂದ ಸಾಧ್ಯವಾಗದು..”
ಬಹುಪತ್ನಿತ್ವವು ಇಸ್ಲಾಮಿನಲಿ ಕಡ್ಡಾಯವಲ್ಲದಾಗಿದ್ದು ಒಬ್ಬ ನೈಜ ಮುಸ್ಲಿಮನಾಗಲು 4 ಪತ್ನಿಯರನ್ನು ಹೊಂದಿರಬೇಕೆಂಬ ಷರತ್ತೇನು ಇಲ್ಲ. ಇಂಗ್ಲೀಷ್ ಭಾಷೆಯಲ್ಲಿ ಹೇಳುವುದಾದರೆ ಇದೊಂದು “exಛಿeಠಿಣioಟಿ”ಮಾತ್ರವೆ ಆಗಿದೆ. ಇಸ್ಲಾಂ ಧರ್ಮದಲ್ಲಿ “ಮಾಡು” ಮತ್ತು “ಮಾಡದಿರು” ಎಂಬುದನ್ನು 5 ವಿಭಾಗವಾಗಿ ವಿಂಗಡಿಸಬಹುದು.
ಅ) ಫರ್ಜ (Obligatory) ಕಡ್ಡಾಯ ಮಾಡಲ್ಪಟ್ಟವುಗಳು
ಆ) ಮುಸ್ತಹಬ್ (Recomended) ಶಿಫಾರಸು ಮಾಡಲ್ಪಟ್ಟವುಗಳು
ಇ) ಮಬಾಹ್ (Permitted) ಅನುಮತಿಸಲ್ಪಟ್ಟವುಗಳು
ಈ) ಮಕ್ರೂಹ್ (Disliked) ನಿರುತ್ಸಾಹಗೊಳಿಲ್ಪಟ್ಟವುಗಳು
ಉ) ಹರಾಮ್ (Prohibited) ನಿಷೇಧಿಸಲ್ಪಟ್ಟವುಗಳು
ಬಹು ಪತ್ನಿತ್ವವು ಮಧ್ಯ ವಿಭಾಗವಾದ ಮುಬಾಹ್‍ನಲ್ಲಿ ಬರುತ್ತದೆ ಇಸ್ಲಾಂ ಧರ್ಮವು 4 ಪತ್ನಿಯರನ್ನು ಹೊಂದಿದಂತ ಮುಸ್ಲಿಮನನ್ನು ಏಕಪತ್ನಿಯನ್ನು ಹೊಂದಿರದ ಮುಸ್ಲಿಮನಿಗಿಂತ ಉತ್ತಮನೆಂದು ಪರಿಗಣಿಸಿಲ್ಲ.

5) ಹೆಣ್ಣಿನ ಸರಾಸರಿ ಆಯಷ್ಯವು ಗಂಡಿಗಿಂತ ಹೆಚ್ಚಾಗಿರುತ್ತದೆ
ಪ್ರಾಕೃತಿಕವಾಗಿ ಗಂಡು ಮತ್ತು ಹೆಣ್ಣಿನ ಹುಟ್ಟಿನ ಅನುಪಾತವು ಹೆಚ್ಚು ಒಂದೇ ಆಗಿರುತ್ತಚೆ. ಒಂದು ಹೆರ್ಣನು ಮಗುವಿನ ದೇಹದ ರೋಗ ನಿರೋಧಕ ಶಕ್ತಿಯು ಗಂಡು ಮಗುವಿಗಿಂತ ಹೆಚ್ಚಾಗಿರುತ್ತ. ಅಂದರೆ ಒಂದು ಹೆಣ್ಣು ಮಗುವಿನ ದೇಹವು ರೋಗಕಾರಕ ವೈರಸ್ ಗಳ ವಿರುದ್ಧ ಹೋರಾಡುವ ಶಕ್ತಿಯು ಗಂಡು ಮಗುವಿಗಿಂತ ಹೆಚ್ಚಾಗಿರುತ್ತದೆ. ಆದ್ದರಿಂದ ಸಾಮಾನ್ಯವಾಗಿ ಮರಣ ಸಂಭವವು ಹೆಣ್ಣು ಮಗುವಿಗೆ ಹೋಲಿಸಿದಾಗ ಗಂಡು ಮಗುವಿಗೆ ಅಧಿಕವಾಗಿರುತ್ತದೆ. ಯುದ್ಧಗಳು ಸಂಭವಿಸಿದಾಗಲೂ ಮರಣ ಸಂಭವವು ಹೆಣ್ಣಿಗಿಂತ ಗಂಡಿಗೇ ಅಧಿಕವಾಗಿರುತ್ತದೆ. ಇದಲ್ಲದೆ ಅಪಘಾತಗಳಲ್ಲ್ಲಿಯೂ ಮರಣ ಹೊಂದುವ ಗಂಡಿನ ಸಂಖ್ಯೆಯು ಹೆಣ್ಣಿಗಿಂತ ಅಧಿಕವಾಗಿರುತ್ತದೆ. ಆಧ್ದರಿಂದ ಯಾವುದೇ ಒಂದು ನಿರ್ಧಿಷ್ಠ ಕಾಲದಲ್ಲಿ ನಾವು ವಿದುರರ ಸಂಖ್ಯೆಗಿುತ ವಿಧವೆಯರ ಸಂಖ್ಯೆಯನ್ನೇ ಹೆಚ್ಚಾಗಿ ಕಾಣಬಹುದು.

6) ಭಾರತದಲ್ಲಿ ಸ್ತ್ರೀಯರ ಸಂಖ್ಯೆ ಪುರುಷರಿಂಗಿಂತ ಕಡಿಮೆಯಾಗಲೂ ಭ್ರೂಣ ಹತ್ಯೆ ಕಾರಣ
ಭಾರತವು ಮಾತ್ರ ಕಡಿಮೆ ಸಂಖ್ಯೆಯ ಸ್ತ್ರೀಯರನ್ನು ಹೊಂದಿರುವ ಅಪರೂಪದ ದೇಶಗಳಲ್ಲೊಂದಾಗಿದೆ. ಇದಕ್ಕೆ ಹೆಣ್ಣು ಭ್ರೂಣ ಹತ್ಯೆಯೇ ಕಾರಣವಾಗಿದ್ದು, ಪ್ರತಿ ವರ್ಷವೂ ಹೆಣ್ಣು ಭ್ರೂಣ ಹತ್ಯೆಯ ಸಂಖ್ಯೆಯು ಒಂದು ಮಿಲಿಯನ್ನಗಿಂತಲೂ ಹೆಚ್ಚಾಗಿದೆ. ಈ ಕೆಟ್ಟ ಚಾಳಿಯು ನಿಂತು ಹೋದರೆ ಭಾರತವೂ ಅಧಿಕ ಸಂಖ್ಯೆಯ ಸ್ತ್ರೀಯರನ್ನು ಹೊಂದಿರುವ ದೇಶಗಳ ಸಾಲಿಗೆ ಸೇರುತ್ತದೆ.
i. ಅಮೇರಿಕದ ಸ್ತ್ರೀಯರ ಸಂಖ್ಯೆಯು ಪುರುಷರಿತಿಂತ 7.8 ಮಿಲಿಯನ್ ಅಧಿಕವಾಗಿರುತ್ತದೆ. ನ್ಯೂಯಾರ್ಕ್ ನಗರವೊಂದರಲ್ಲೇ ಪುರುಷರಿಗಿಂತ ಒಂದು ಮಿಲಿಯನ್ನನಷ್ಟು ಅಧಿಕ ಸಂಖ್ಯೆಯ ಸ್ತ್ರೀಯರಿದ್ದಾರೆ. ಅಲ್ಲದೆ ಈ ನಗರಗಳಲ್ಲಿ ಪುರುಷರ ಸಂಖ್ಯೆಯ 1/3 ರಷವ್ಟು ಸಲಿಂಗ ಕಾಮಿಗಳು ಇದ್ದಾರೆ ಅನ್ನು ಇಡಿಯಾಗಿ ತೆಗೆದುಕೊಂಡರೆ ಸುಮಾರು 25 ಮಿಲಿಯನ್‍ಗಿಂತಲೂ ಅಧಿಕ ಸಲಿಂಗಕಾಮಿಗಳಿದ್ದಾರೆ. ಬ್ರಿಟನ್‍ನಲ್ಲಿ 4 ಮಿಲಿಯನ್‍ಗಿಂತಲೂ ಅಧಿಕ ಸಂಖ್ಯೆಯ ಸಲಿಂಗಕಾಮಿ ಸ್ತ್ರೀಯರಿದ್ದಾರೆ. ಜರ್ಮನಿಯ ಸ್ತ್ರೀಯರ ಸಂಖ್ಯೆಯ ಪುರುಷರಿಗಿಂತ ಸುಮಾರು 5 ಮಿಲಿಯನ್ನ ನಷ್ಟು ಅಧಿಕವಾಗಿದೆ. ರಷ್ಯಾ ದೇಶವು ಪುರುಷರಿಗಿಂತ ಸುಮಾರು 9 ಮಿಲಿಯನ್ನ ಅಧಿಕ ಸ್ತ್ರೀಯರನ್ನು ಹೊಂದಿದ ದೇಶವಾಗಿದೆ. ಇನ್ನು ಜಗತ್ತಿನಲ್ಲಿ ಎಷ್ಟು ಸ್ತ್ರೀಯರು ಪುರುಷರಿಗಿಂತ ಅಧಿಕವಾಗಿದ್ದಾರೆಂಬುದನ್ನು ಆ ದೇವನೊಬ್ಬನೇ ಬಲ್ಲ.

7) ಎಲ್ಲ ಪುರುಷರು ಒಂದೇ ಪತ್ನಿಯನ್ನು ಹೊಂದಬೇಕೆನ್ನುವ ನಿಬಂಧನೆಯು ಪ್ರಾಯೋಗಿಕವಲ್ಲ
ಅಮೇರಿಕವನ್ನು ತೆಗೆದುಕೊಂಡರೆ ಮತ್ತು ಅಲ್ಲಿ ಏಕ ಪತ್ನಿತ್ವವನ್ನು ಕಡ್ಡಾಯಗೊಳಿಸಿದರೆ ಸುಮರು 30-32 ಮಿಲಿಯನ್ನ ಸ್ತ್ರೀಯರಿಗೆ ವಿವಾಹವಾಗಲು ಪುರುಷರಿರುವುದಿಲ್ಲ. ಅಲ್ಲದೆ ಮೇಲೆ ತಿಳಿಸಿದ ದೇಶಗಳಾದ ಬ್ರಿಟನ್ ಜರ್ಮನಿ, ರಷ್ಯಾಗಳಲ್ಲೂ ಕ್ರಮವಾಗಿ 4,5, 6 ಮಿಲಿಯನ್‍ದಷ್ಟು ಸ್ತ್ರೀಯರಿಗೆ ವಿವಾಹವಾಗಲೂ ಪುರುಷರಿರುವುದಿಲ್ಲ.
ಉದಾಹರಣೆಗೆ ನನ್ನ ಅಥವ ನಿಮ್ಮ ಸಹೋದರಿಯೊಬ್ಬಳು ಅಮೇರಿಕದಲ್ಲಿ ವಾಸಿಸುವ ಅವಿವಾಹಿತ ಸ್ತ್ರೀಯರೊಲ್ಲಬ್ಬಳಾಗಿದ್ದರೆ ಅವಳಿಗಿರುವುದು 2 ಆಯ್ಕೆಗಳು ಮಾತ್ರ.
1) ವಿವಾಹಿತನೊಬ್ಬನ ದ್ವಿತೀಯ ಪತ್ನಿಯಾಗುವುದು.
2) ವಿವಾಹ ಬಂಧನದಿಂದ ಮುಕ್ತವಾಗಿದ್ದು, ಇತರ ಅಡ್ಡ ಮಾರ್ಗಗಳಿಂದ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದು. ಒಬ್ಬ ನೀತಿವಂತನು ಒಂದನೆಯದನ್ನೇ ಆರಿಸುತ್ತಾನೆಂಬುದರಲ್ಲಿ ಸಂದೇಹವಿಲ್ಲ. ಪಾಶ್ಚಾತ್ಯ ಸಮಾಜದಲ್ಲಿ ವಿವಾಹಿತ ಪುರುಷನು ಒಂದಕ್ಕಿಂತ ಅಧಿಕ ಪ್ರೇಯಸಿಯರನ್ನು ವಿವಾಹೇತ್ ಸಂಬಂಧಗಳನ್ನು ಹೊಂದಿರುವುದು ಸಾಮಾನ್ಯವಾಗಿದ್ದು, ಇದರಲಿಲ ಸ್ತ್ರೀಯು ಒಂದು ತರಹದ ಅಪಮಾನಕರ ಮತ್ತು ರಕ್ಷಣೆಯಿಲ್ಲದಂತಹ ಬದಕನ್ನು ಸಾಗಿಸಬೇಕಾಗಿರುತ್ತದೆ. ಇದೇ ಸಮಾಜವು ಇಂತಹ ಸಂಬಂಧಗಳನ್ನು ವಿವಾಹ ಬಂಧನದೊಳಗೆ ತರಲು ಸಮ್ಮತಿಸುವುದಿಲ್ಲ ಎಂಬುದು ಬಹಳ ವಿಪರ್ಯಾಸವೂ ವಿಚಿತ್ರವೂ ಆಗಿದೆ.
ಆದ್ದರಿಂದ ಬಹುಪತ್ನಿತ್ವವನ್ನು ಅನುಮತಿಸಿದ ಇಸ್ಲಾಂ ಧರ್ಮದ ಉದ್ದೇಶವು ಮುಖ್ಯವಾಗಿ ಸ್ತ್ರೀಯರ ಗೌರವವನ್ನು ಕಾಪಾಡುವುದು ಸ್ತಾನಮಾನಗಳನ್ನು ನೀಡುವುದು ಆಗಿರುತ್ತದೆ.

ಬಹುಪತ್ನಿತ್ವ
ಇಸ್ಲಾಂ ಧರ್ಮವು ಪುರುಷನಿಗೆ ಬಹುಪತ್ನಿತ್ವವನ್ನು ಅನುಮತಿಸಿದಂತೆ ಸ್ತ್ರೀಯರಿಗೇಕೆ ಬಹುಪತಿತ್ವವನ್ನು ಅನುಮತಿಸಿಲ್ಲ?
ಅಲ್ಲಾಹ್ ಸ್ತ್ರೀ ಪುರುಷರನ್ನು ಸಮಾನರನ್ನಾಗಿ ಸೃಷ್ಟಿಸಿದರೂ, ಅವರಿಬ್ಬರ ಸಾಮಥ್ರ್ಯ ಮತ್ತು ಜವಾಬ್ದಾರಿಗಳನ್ನು ವ್ಯತ್ಯಾಸಗಳನ್ನು ಇರಿಸಿರುವನು. ಅಲ್ಲದೆ ಇವರಿಬ್ಬರೂ ಪ್ರತ್ಯೇಕ ಶಾರೀರಕ ಮತ್ತು ಮಾನಸಿಕ ಸ್ಥಿತಿಯನ್ನು ಹೊಂದಿದವರಾಗಿದ್ದಾರೆ. ಸಮಾಜದಲ್ಲಿ ಅವರಿಬ್ಬರ ಪಾತ್ರ ಮತ್ತು ಜವಾಬ್ದಾರಿಗಳೂ ಬೇರೆ ಬೇರೆಯಾಗಿವೆ. ಇಸ್ಲಾಂನಲ್ಲಿ ಸ್ತ್ರೀ ಪುರುಷರು ಸಮಾನರು. ಆದರೆ ಏಕಪ್ರಕಾರದವರಲ್ಲ.
ಪವಿತ್ರ ಕುರ್ ಆನ್ ನ 4 ನೇ ಅಧ್ಯಾಯವದ ಸೂರಾ: ಅನ್ನೀಸಾದ 22-24 ನೇ ವರಗಿನ ಸೂಕ್ತಗಳು ಪುರುಷರಿಗೆ ವಿವಾಹ ನಿಷಿದ್ಧವಾದ ಸ್ತ್ರೀಯರ ವಿವರಗಳನ್ನು ಕೊಡುತ್ತಾ “ಮತ್ತು ವಿವಾಹಿತ ಸ್ತ್ರೀಯು ಕೂಡಾ (ನಿಷಿದ್ಧಳು)” ಎಂದು ವಿವಾಹ ಬಂಧದಲ್ಲೇರ್ಪಟ್ಟ ಸ್ತ್ರೀಯರನ್ನು ಪುರುಷರಿಗೆ ನಿಷಿದ್ಧವಾಗಿರುತ್ತದೆ.

ಬಹುಪತ್ನಿದಿಂದಾಗುವ ತೊಂದರೆಗಳನ್ನು ಹೀಗೆ ಪರೀಕ್ಷಿಸಬಹುದು:
1) ಪುರುಷನು ಅಧಿಕ ಪತ್ನಿಯರನ್ನು ಹೊಂದಿದಲ್ಲಿ ಹುಟ್ಟುವ ಮಕ್ಕಳ ತಂದೆ ಮತ್ತು ತಾಯಿಯನ್ನು ಸುಲಭವಾಗಿ ಗುರುತಿಸಬಹುದು. ಆದರೆ ಒಂದಕ್ಕಿಂತ ಹೆಚ್ಚು ಗಂಡಂದಿರನ್ನು ಹೊಂದಿದ ಸ್ತ್ರೀಯರಿಗೆ ಹುಟ್ಟಿದ ಮಕ್ಕಳ ತಂದೆಯನ್ನು ಗುರುತಿಸುವುದು ಸುಲಭವಲ್ಲ. ಇಸ್ಲಾಂ ಧರ್ಮವು ಮಕ್ಕಳ ತಂದೆ ತಾಯಿಯರ ಗುರುತಿಸುವಿಕೆಗೆ ಬಹಳ ಪ್ರಾಮುಖ್ಯತೆಯನ್ನು ಕೊಡುತ್ತದೆ. ಮನಃಶಾಸ್ತ್ರಜ್ಞರು ಹೇಳುತ್ತಾರೆ ತಮ್ಮ ತಂದೆ ತಾಯಿಯನ್ನು ಗುರುತಿಸಿಕೊಳ್ಳಲಾಗದ ಮಕ್ಕಳು, ಅದರಲ್ಲೂ ಪ್ರತ್ಯೇಕವಾಗಿ ತಂದೆಯನ್ನು ಗುರುತಿಸಿಕೊಳ್ಳಲಾರದವರು ಮಾನಸಿಕ ಆಘಾತಕ್ಕೊಳಗಾಗುತ್ತಾರೆ. ಮತ್ತು ಬಾಲ್ಯತನದ ಸವಿಯನ್ನು ಕಳೆದುಕೊಳ್ಳುತ್ತಾರೆ. ಒಬ್ಬ ವೇಶ್ಯೆಯ ಮಗುವು ಆರೋಗ್ಯಕರ ಬಾಲ್ಯತನವನ್ನು ಕಳೆದು ಕೊಳ್ಳಲು ಇದೇ ಕಾರಣವಾಗಿದೆ.
2) ಪುರುಷನು ಸ್ತ್ರೀಗೆ ಹೋಲಿಸಲ್ಪಟ್ಟಾಗ ಹೆಚ್ಚು ಪಾಲಿಗಾಮಸ್(ಅಂದರೆ ಒಂದಕ್ಕಿಂತ ಹೆಚ್ಚು ಜತೆಗಾರ್ತಿ ಅಥವಾ ಜತೆಗಾರರನನ್ನು ಹೊಂದುವ ಸ್ವಭಾವದನು ) ಆಗಿದ್ದಾನೆ.
3) ಜೀವಶಾಸ್ತ್ರದ ಪ್ರಕಾರ ಹೆಚ್ಚು ಪತ್ನಿಯರನ್ನು ಹೊಂದಿದ ಪುರುಷನು ಪತಿಯ ಸ್ಥಾನದಲ್ಲಿದ್ದುಕೊಂಡು ತನ್ನ ಕರ್ತವ್ಯಗಳನ್ನು ನಿರ್ವಹಿಸುವುದು ಸುಲಭವಾಗಿದ್ದು, ಅದೇ ವೇಳೆ ಸ್ತ್ರೀಯು ಹೆಚ್ಚು ಪತಿಯರನ್ನು ಹೊಂದಿದ್ದರೆ ಅವಳೀಗ ಪತ್ನಿಯಾಗಿ ತನ್ನ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಿಲ್ಲ. ಆಲ್ಲದೆ ಒಬ್ಬ ಸ್ತ್ರೀಯು ತನ್ನ ಋತುಚಕ್ರದ ವಿವಿಧ ಹಂತಗಳಲ್ಲಿ ಅನೇಕ ರೀತಿಯ ವರ್ತನೆಗಳಿಗೂ, ಮಾನಸಿಕ ಬದಲಾವಣೆಗಳೀಗೂ ಒಳಪಡುತ್ತಾಳೆ.
4) ಹಲವು ಪತಿಯರನ್ನು ಹೊಂದಿದ ಸ್ತ್ರೀಯು ಏಕಕಾಲಕ್ಕೆ ಹಲವು ಜತೆಗಾರರೊಂದಿಗೆ ಲೈಂಗಿಕ ಸಂಪರ್ಕವನ್ನು ಹೊಂದಬೇಕಾಗಿದ್ದು, ಈ ರೀತಿಯ ಲೈಂಗಿಕ ಸಂಪರ್ಕದಿಂದ ಅವಳು ಹಲವು ರೀತಿಯ ಲೈಂಗಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಅವಳ ಪತಿಯರು ಯಾವುದೆ ವಿವಾಹೇತರ ಲೈಂಗಿಕ ಸಂಬಂಧವನ್ನು ಹೊಂದಿಲ್ಲದವರಾಗಿದ್ದರೂ, ಈ ರೋಗಗಳು ಅವಳ ಪತಿಯಂದಿರಿಗೆ ಹರಡುತ್ತದೆ. ಹೆಚ್ಚು ಪತ್ನಿಯರನ್ನು ಹೊಂದಿದ ಪುರುಷನ ವಿಷಯದಲ್ಲಿ ಇಂತಹ ಪದ್ಧತಿ ಸಾಧ್ಯತೆಗಳಿಲ್ಲ.
ಮೇಲಿನ ಸುಲಭವಾಗಿ ಗುರುತಿಸಿಲ್ಪಡಬಹುದಾದಂತಹ ಕೆಲವು ಕಾರಣಗಳಾಗಿದ್ದು, ಅಲ್ಲಾಹ್‍ನ ಅನಂತ ಜ್ಞಾನ ಭಂಡಾರದಲ್ಲಿ ಬಹು ಪತಿತ್ವವನ್ನು ನಿಷೇಧಿಸಿರುವುದಕ್ಕೆ ಇನ್ನೂ ಹಲವಾರು ಕಾರಣಗಳಿರಲೂಬಹುದು.